Monday, June 29, 2009

malenaadina jeevana shaili

ನನ್ನ ಊರು ಮಲೆನಾಡಿನ 50 ಮನೆಗಳಿರುವ ಒಂದು ಸಣ್ಣ ಊರು. ಆ ಊರಿನ ಹೆಸರು ಹಾಲ್ಮುತ್ತೂರು. ಹೆಚ್ಹಾಗಿ ಹೊಯ್ಸಳ ಕರ್ನಾಟಕ ಬ್ರಾಹ್ಮಣರೇ ಇರುವ ಹಳ್ಳಿ. ಇದು ತೀರ್ಥಹಳ್ಳಿ ಇಂದ ೨೯ ಕಿಲೋಮೀಟರು, ಕೊಪ್ಪ ಇಂದ ೨೪ ಕಿಲೋಮೀಟರು, ಹಾಗು ಶೃಂಗೇರಿ ಇಂದ ೩೨ ಕಿಲೋಮೀಟರು ದೂರದಲ್ಲಿದೆ. ಕರ್ನಾಟಕದಲ್ಲೇ ಹೆಚ್ಚು ಮಳೆ ಬೀಳುವ ಆಗುಂಬೆ ನನ್ನೂರಿನಿಂದ ಕೇವಲ ೨೦ ಕಿಲೋಮೀಟರು ದೂರ.

ನೀವು ಸಿನೆಮ ನಲ್ಲಿ ನೋಡಿರುವ ಹಾಗೆ ಮಲೆನಾಡು ಎಂದರೆ ಬರಿ ಬೋಳು ಗುಡ್ಡ, ಒಂದು ಜಲಪಾತ, ಎಲ್ಲ ಕಡೆ ಮುಸುಕಿದ ಮಂಜು ಅಲ್ಲ.. ಮಲೆನಾಡು ಅಂದ್ರೆ ಎಲ್ಲಿ ನೋಡಿದರೂ ಕಾಡು, ಮದ್ಯದಲ್ಲಿ ನದಿಗಳು, ಹೆಜ್ಜೆಗೊಂದು ತೊರೆ, ಮೈಲಿಗೊಂದು ಮನೆ, ತೋಟ, ಬೋಳು ಗುಡ್ಡದ ಮೇಲೆ ಟೀ ಎಸ್ಟೇಟ್, ಗಂಟೆಗೊಂದು ಬಸ್, ಅದಇಕೆ ತೋಟ, ಆಲೆಮನೆ, ಬಿದಿರು ಮಟ್ಟುಗಳು..

ನನ್ನೂರಿನಲ್ಲಿ ತುಂಬಾ ಕಾಡು. ನೀವು ಮಲೆನಾಡಿನ ಮಳೆಯನ್ನು ಒಮ್ಮೆ ನೋಡಬೇಕು. ಅಲ್ಲಿಯ ಮಳೆಗಾಲವೇ ಒಂದು ಚಂದ. ಒಮ್ಮೆ ಮಳೆ ಶುರು ಆಯಿತು ಎಂದರೆ ೩ ದಿನ, ೧ ವಾರ ಮಳೆ ಬಿಡುವುದೇ ಇಲ್ಲ. ಹಾಗೆಂದು ತುಂಬಾ ಜೋರಾಗಿ ಮಳೆ ಬರುತ್ತದೆ ಎಂದು ಅಲ್ಲ.. ಜಿಟಿ ಜಿಟಿ ಮಳೆ ದಿನವಿಡೀ ಬರುತ್ತೆ. ಮಳೆ ಬಂತು ಎಂದರೆ ಎಲ್ಲ ನದಿಗಳೂ ತುಂಬಿ ಹರಿಯುತ್ತವೆ. ಪ್ರತಿಯೊಂದು ರಸ್ತೆ, ಸೇತುವೆ ಮೇಲೆ ನೀರು ನಿಂತು ಮದ್ಯದ ಊರುಗಳು ದ್ವೀಪ ಗಳೇ ಆಗಿಹೋಗುತ್ತವೆ. ವಾರಗಟ್ಟಲೆ ನೀರು ಇಳಿಯುವುದಿಲ್ಲ. ರಸ್ತೆ ಬಂದ್, ಬಸ್ ಬಂದ್. ಜನ ಸಂಚಾರವೇ ಇರೋದಿಲ್ಲ.

ನಮ್ಮ ಊರಿನ ಬಸ್ ಗಳ ಕಥೆಯೇ ವಿಭಿನ್ನ. ಇಲ್ಲಿ ಯಾರೂ compitation ಮಾಡೋದಿಲ್ಲ. ಇಲ್ಲಿ ಭಾರತದಲ್ಲೇ ವಿಭಿನ್ನವಾದ ಒಂದು ಬಸ್ ವ್ಯವಸ್ಥೆ ಇದೆ. ಹಲವು ಬಸ್ ಗಳ ಮಾಲೀಕರು ಸೇರಿಕೊಂಡು ಸಹಕಾರ ಸಾರಿಗೆ ಅಂತ ಒಂದು ಗುಂಪು ಮಾಡಿಕೊಂಡಿದ್ದಾರೆ. ಇಂಥ ಒಂದು ವ್ಯವಸ್ಥೆ ಇನ್ನೆಲ್ಲೂ ಕಾಣೋದಿಲ್ಲ. ಇಲ್ಲಿಯ ರಸ್ತೆಗಳು ಸರಿ ಇರೋದಿಲ್ಲ, ಹಾಗಾಗಿ ಬಸ್ ಗಳು ತುಂಬಾ ನಿಧಾನ. ನನ್ನೂರಿಗೆ ದಿನಕ್ಕೆ ೨೮ ಬಸ್ ಬರುತ್ತವೆ. ಬೆಳಗ್ಗೆ ಒಂದು ksrtc ಬಸ್ ಬೆಂಗಳೂರಿನಿಂದ ಶೃಂಗೇರಿ ಗೆ ಹೋಗುತ್ತದೆ. ಮತ್ತೆ ೧೬ ಬಸ್ ಕೊಪ್ಪಕ್ಕೆ ಮತ್ತೆ ೧೦ ಬಸ್ ಕಮ್ಮರಡಿ ಗೆ, ಮತ್ತೆ ಸಂಜೆ ಒಂದು ಬಸ್ ಶೃಂಗೇರಿ ಇಂದ ಬೆಂಗಳೂರಿಗೆ ಹೋಗುತ್ತದೆ...

ಮೊನ್ನೆ ನಾನು ತೀರ್ಥಹಳ್ಳಿ ಇಂದ ಕಮ್ಮರಡಿ ಗೆ ಬಸ್ ಹತ್ತಿದೆ. ಆ ಬಸ್ ಹೊಸ ಅಗ್ರಹಾರ ಮೇಲೆ ಹೋಗುತ್ತದೆ. ಆ ಬಸ್ ನನಗೆ ಮಲೆನಾಡಿನ ದರ್ಶನ ಮಾಡಿಸಿಬಿಟ್ಟಿತು. ಗಾಢ ಕಾಡು, ತುಂಗಾ ನದಿ, ಹಲವು ತೊರೆಗಳು, ಕುಂದಾದ್ರಿ ಬೆಟ್ಟ ಎಲ್ಲ ಕಾಣಿಸಿತು. ಇನ್ನು ಮಲೆನಾಡಿನ ತಿಂಡಿಗಳ ಬಗ್ಗೆ ಹೇಳಬೇಕು.
ಇಲ್ಲಿಯ ಅಡುಗೆ ಪದ್ದತಿ ಎಲ್ಲೂ ನೋಡಲು ಸಿಗೋದಿಲ್ಲ. ಅಲ್ಲಿ ಕಾಡಿನಲ್ಲಿ ಬೆಳೆಯುವ ಮರಗೆಸು, ವಂದೆಳಗ, ಕಳಲೆ ಇವುಗಳ ರುಚಿಯೇ ಬೇರೆ. ಇಲ್ಲಿ ಮಾಡುವ ಕೆಸುವಿನ ಪತ್ರೊಡೆ, ಅರಮರಳು ಕಾಯಿಯ ಉಪ್ಪಿನ ಕಾಯಿ, ನೀರು ದೋಸೆ, ಕಳಲೆ ಪಲ್ಯ, ಹಲಸಿನ ಹಪ್ಪಳ, ಅಂತೆ ಕಾಯಿ ಗೊಜ್ಜು ಇವುಗಳದೆಲ್ಲ ರುಚಿ ಹೇಳಿದರೆ ಗೊತ್ತಾಗೊಲ್ಲ. ನೆನೆಸಿ ಕೊಂಡರೆ ಬಾಯಲ್ಲಿ ನೀರು ಬರತ್ತೆ.
ನನ್ನ ಪ್ರಕಾರ ಮಲೆನಾಡಿನಲ್ಲಿ ಬದುಕುವವನೆ ಪುಣ್ಯವಂತ. ಅಲ್ಲಿನ ಕಾಡು, ಪ್ರಕೃತಿ, ನದಿ, ಬೆಟ್ಟ ಗುಡ್ಡ, ಊಟ, ಗದ್ದೆ, ತೋಟ ಆಹಾ ಅವನೆಸ್ತು ಪುಣ್ಯವಂತ... :)
ಇನ್ನು ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ರಸ್ತೆಗಳ ಬಗ್ಗೆ ಹೇಳಬೇಕು. ಅವುಗಳನ್ನು ಘಾಟಿ ಅಂತಾರೆ. ಶಿರಾಡಿ ಘಟ, ಆಗುಂಬೆ ಘಟ, ಚಾರ್ಮಾಡಿ ಘಟ ಪ್ರಮುಖವಾದವು. ಶಿರಾಡಿ ಘಾಟಿ ಬೆಂಗಳೂರಿನಿಂದ ಮಂಗಳೂರನ್ನು ಸಂಪರ್ಕಿಸುತ್ತೆ, ಚಾರ್ಮಾಡಿ ಘಟ ಕೊಟ್ಟಿಗೆ ಹಾರ ಇಂದ ಧರ್ಮಸ್ಥಳ ಕ್ಕೆ ಹೋಗುತ್ತೆ. ಈ ಘಾಟಿಯಲ್ಲಿ ಸಿಗುವ ನೂರಾರು ಮಿನಿ ಜಲಪಾತಗಳು ಅದ್ಭುತ. ಇನ್ನು ಆಗುಂಬೆ ಬಗ್ಗೆ ಹೇಳೋದೇ ಬೇಡ. ಅಲ್ಲಿಯ ಬರ್ಕಣ ಫಾಲ್ಸ್, ಸೂರ್ಯಾಸ್ತ ಅತ್ಯದ್ಭುತ. ಇಲ್ಲಿ ಟ್ರೆಕ್ಕಿಂಗ್ ಗೆ ತುಂಬಾ ಅವಕ್ಕಶಗಳಿವೆ. ಕೊಡಚಾದ್ರಿ, ಕಾನೂರು ಕೋಟೆ, ಕುದ್ರೆಮುಖ, ಪುಷ್ಪಗಿರಿ, ಮುಳ್ಳಯ್ಯನಗಿರಿ, ಅಮೇದಿಕಲ್ ಬೆಟ್ಟ, ಕುಂದಾದ್ರಿ ಗುಡ್ಡ, ಮತ್ತೆ ಒಂಬತ್ತು ಗುಡ್ಡ ಅಂತು ಭಯಂಕರ. ಇಲ್ಲಿ ಹೋದವರು ಹೊರಗೆ ಬರೋದು ತುಂಬಾ ಕಷ್ಟ.

ಒಟ್ಟಿನಲ್ಲಿ ಮಲೆನಾಡು ಕಿ ಜೈ :) :)